ಗೋಕಾಕ್ ತಾಲೂಕಿನ ದುರ್ದುಂಡಿ ಗ್ರಾಮದ ಹಾಲಪ್ಪ ಅಂತರಗಟ್ಟಿ ಎಂಬುವವರಿಗೆ ಆನ್‌ಲೈನ್‌ನಲ್ಲಿ ವಂಚನೆ ಮಾಡಲಾಗಿದೆ. ಅವರು ತಮ್ಮ ಮೊಬೈಲ್‌ನಲ್ಲಿ ಅಪರಿಚಿತ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, ಘಟಪ್ರಭಾದಲ್ಲಿರುವ ತಮ್ಮ ಎಸ್‌ಬಿಐ ಬ್ಯಾಂಕ್ ಖಾತೆಯಿಂದ 3.40 ಲಕ್ಷ ರೂ.ಗಳು ಕಣ್ಮರೆಯಾಗಿರುವುದು ಕಂಡುಬಂದಿದೆ. ಈ ಘಟನೆಯಿಂದ ಅವರು ಆಘಾತಕ್ಕೊಳಗಾಗಿದ್ದಾರೆ. ಈ ಸಂಬಂಧ ಅವರು 8 ರಂದು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
0 ಕಾಮೆಂಟ್‌ಗಳು