ಮೈಸೂರು (ಡಿ. 17): ಬ್ಯಾಂಕುಗಳು ಸಾಮಾನ್ಯವಾಗಿ ಹಣ ಉಳಿಸಲು ಮತ್ತು ಚಿನ್ನಾಭರಣಗಳನ್ನು ಭದ್ರತೆಯಾಗಿ ಇಟ್ಟುಕೊಳ್ಳಲು ಟ್ರಸ್ಟ್ ಕೇಂದ್ರಗಳಾಗಿವೆ. ಆದರೆ ಮೈಸೂರಿನ ಹಿನಕಲ್‌ನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಚಿನ್ನವನ್ನು ಅಡಮಾನ ಇಟ್ಟಿದ್ದ ಗ್ರಾಹಕರಿಗೆ ಬ್ಯಾಂಕ್ ವಂಚನೆ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಚ್ಚಿಟ್ಟ ಚಿನ್ನವನ್ನು ಬಿಡುಗಡೆ ಮಾಡಿ ಮನೆಯಲ್ಲಿ ಪರಿಶೀಲಿಸಿದಾಗ, ಚಿನ್ನದ ಆಭರಣಗಳ ಸ್ವರೂಪ ಬದಲಾಗಿರುವುದು ಬೆಳಕಿಗೆ ಬಂದಿದ್ದು, ನೂರಾರು ಗ್ರಾಹಕರು ಬ್ಯಾಂಕ್‌ಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಹಿನಕಲ್ ಕೆನರಾ ಬ್ಯಾಂಕ್‌ನಲ್ಲಿ ಅಡಮಾನ ಇಟ್ಟಿದ್ದ ಚಿನ್ನವನ್ನು ಕೆಲವು ಗ್ರಾಹಕರು ಇತ್ತೀಚೆಗೆ ಹಣ ಪಾವತಿಸಿ ಬಿಡಿಸಿಕೊಂಡಿದ್ದರು. ಹೊರನೋಟಕ್ಕೆ ಚಿನ್ನದ ತೂಕ ಸರಿಯಾಗಿ ಕಂಡರೂ, ಆಭರಣದ ವಿನ್ಯಾಸದಲ್ಲಿ ಬದಲಾವಣೆ ಇರುವುದು ಗ್ರಾಹಕರ ಗಮನಕ್ಕೆ ಬಂದಿದೆ. ಉದಾಹರಣೆಗೆ, ಗ್ರಾಹಕರೊಬ್ಬರು 85 ಗುಂಡುಗಳಿದ್ದ ಚಿನ್ನದ ಸರವನ್ನು ಅಡಮಾನ ಇಟ್ಟಿದ್ದರು. ಆದರೆ ಅದನ್ನು ವಾಪಸ್ ಪಡೆದಾಗ ಅದರಲ್ಲಿ ಕೇವಲ 77 ಗುಂಡುಗಳಿದ್ದವು! ಸರವನ್ನು ಧರಿಸಲು ಪ್ರಯತ್ನಿಸಿದಾಗ ಅದರ ಉದ್ದ ಕಡಿಮೆಯಾಗಿರುವುದು ಕಂಡುಬಂದಿದೆ. ಈ ರೀತಿ ಹಲವು ಗ್ರಾಹಕರ ಆಭರಣಗಳಲ್ಲಿ ವ್ಯತ್ಯಾಸ ಕಂಡುಬಂದಿದೆ.

0 ಕಾಮೆಂಟ್‌ಗಳು