ಬೆಳಗಾವಿ: ಪೀರನವಾಡಿಯಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಗಾಯಗೊಂಡಿದ್ದ ಸದಾಶಿವನಗರದ ಯುವಕ ಚಿಕಿತ್ಸೆ ವೇಳೆ ಮಂಗಳವಾರ ಮೃತಪಟ್ಟಿದ್ದಾರೆ. ಮೃತರನ್ನು ಪ್ರಣಯ್ ಸುನಿಲ್ ಮೋಹಿತೆ (ವಯಸ್ಸು 22) ಎಂದು ಗುರುತಿಸಲಾಗಿದೆ.
ಕಳೆದ ಶನಿವಾರ ಅವರ ದ್ವಿಚಕ್ರ ವಾಹನವು ಟ್ರಾಫಿಕ್ ಜಾಮ್‌ಗೆ ಸಿಲುಕಿ ಪಿರನವಾಡಿಯಲ್ಲಿ ಅಪಘಾತಕ್ಕೀಡಾಗಿತ್ತು. ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರು ಅಜ್ಜಿ, ಸಹೋದರಿ ಮತ್ತು ಸೋದರಮಾವನನ್ನು ಅಗಲಿದ್ದಾರೆ.